ಪರಿಸರ ರಕ್ಷಣೆಗೆ ಗ್ರೀನ್ ರೂಫ್ ಟಾಫ್

ಹೆಚ್ಚಾಗುತ್ತಿರುವ ಪರಿಸರ ಮಾಲಿನ್ಯದ ಪ್ರಮಾಣವನ್ನು ಸರಿಪಡಿಸಲು ಪ್ರಯತ್ನಗಳು ಅಲ್ಲಲ್ಲಿ ನಡೆಯುತ್ತಲೇ ಇವೆ. ಪ್ರಯತ್ನಗಳು ಸಾಗುತ್ತಿರುವುದೇನೋ ನಿಜ. ಆದರೆ ಅವು ಯಾವ ಹಂತದಲ್ಲಿವೆ ಎಂದು ಪ್ರಶ್ನಿಸಿಕೊಂಡರೆ ಉತ್ತರ ಕಷ್ಟವಾದೀತು. ಒಬ್ಬರೋ ಅಥವ ಒಂದೆರಡು ಸಂಘಟನೆಗಳ ಪ್ರಯತ್ನವು ನಿರೀಕ್ಷಿತ ಮಟ್ಟದಲ್ಲಿ ಚಿತ್ರಣ ಬದಲಾಯಿಸಲು ಸಾಧ್ಯವಿಲ್ಲ. ಸರಕಾರವೂ ಇದಕ್ಕೆ ಕೈ ಜೋಡಿಸಿದಲ್ಲಿ ಮಾತ್ರ ಬದಲಾವಣೆ ಸಾಧ್ಯ.ಇದಕ್ಕೆ ಉತ್ತಮ ಉದಾಹರಣೆಯೆಂದರೆ ಇತ್ತೀಚೆಗೆ ಫ್ರಾನ್ಸ್‌ನಲ್ಲಿ ಜಾರಿಯಾದ ಒಂದು ಕಾನೂನು.
ಆ ಕಾನೂನು ಹೀಗೆ ಹೇಳುತ್ತದೆ...
ಆ
ಕಾನೂನು ಹೇಳುವುದು ಇಷ್ಟೆ ವಾಣಿಜ್ಯ ವಲಯದಲ್ಲಿ ಕಟ್ಟಲಾಗುವ, ಪ್ರತಿ
ಹೊಸ ಕಟ್ಟಡದ ಮಹಡಿಯಲ್ಲಿ ಭಾಗಶಃ ಗಿಡಗಳು ಅಥವ ಸೋಲಾರ್ ಪ್ಯಾನಲ್
ಹೊಂದಿರಬೇಕು ಎಂದು. ಸೋಲಾರ್ ರೂಪ್‌ಟಾಪ್ ಯೋಜನೆ ನಮ್ಮ
ರಾಜ್ಯದಲ್ಲೂ ದೊಡ್ಡ ಹವಾ ಎಬ್ಬಿಸಿ ಕೊನೆ ತಣ್ಣಗಾಗಿದ್ದು ನೀವು
ನೋಡಿರಬಹುದು. ಇಷ್ಟೇಕೆ ರಾಜ್ಯದಲ್ಲಿ ಸಾರ್ವಜನಿಕ ಸ್ಥಳದಲ್ಲಿ
ಧೂಮಪಾನ ನಿಷೇಧ, ಕಡ್ಡಾಯ ಹೆಲ್ಮೆಟ್, ವಾಹನಗಳಲ್ಲಿನ ಕರ್ಕಶ
ಹಾರ್ನ್ ನಿಷೇಧ ಮೊದಲಾದ ಹಲವು ಕಾನೂನುಗಳು ಹಳ್ಳ ಹಿಡಿದಿರುವುದು
ನೋಡಬಹುದು. ಆದರೆ ಫ್ರಾನ್ಸ್‌ನಲ್ಲಿ ಹೀಗಿಲ್ಲ ಎನ್ನುತ್ತಾನೆ ಸದ್ಯ
ಫ್ರಾನ್ಸ್‌ನಲ್ಲಿ ಉದ್ಯೋಗಿಯಾಗಿರುವ ನನ್ನ ಕಾಲೇಜು ಹಾಸ್ಟೆಲ್‌ನ
ಸಹಪಾಠಿ ಸ್ಟೀವನ್.
ಇ- ವೇಸ್ಟ್ ನಿಯಂತ್ರಣ
ಹಸಿರು
ಚಾವಣಿಯಿಂದ ಉಷ್ಣಾಂಶ ಮತ್ತು ಗಾಳಿ ವ್ಯವಸ್ಥೆ
ಸಮತೋಲನದಲ್ಲಿರುತ್ತದೆ. ಎಲೆಕ್ಟ್ರಾನಿಕ್ ಉಪಕರಣಗಳ ಬಳಕೆ ಕಡಿಮೆ
ಮಾಡುವ ಮೂಲಕ ಇ- ತ್ಯಾಜ್ಯದ ಪ್ರಮಾಣ ಕುಗ್ಗಿಸುವಲ್ಲಿಯೂ ಇದು ಕ್ರಮ
ಪರೋಕ್ಷವಾಗಿ ಸಹಕರಿಸುತ್ತದೆ. ಅಲ್ಲದೆ ಹಸಿರು ಚಾವಣಿಯಲ್ಲಿನ
ಗಿಡಗಳು ಮಲಿನಕಾರಕ ಮತ್ತು ವಿಷಕಾರಿ ಅನಿಲಗಳನ್ನು ತಡೆಯುತ್ತವೆ.
ಏನಿದು ಹಸಿರು ಮೇಲ್ಛಾವಣಿ?
ಕಟ್ಟಡದ
ಟೆರೇಸ್‌ನ್ನು ಹಚ್ಚ ಹಸಿರಿನಿಂದ ತುಂಬಿಸುವ ವಿಧಾನವೇ ಗ್ರೀನ್
ರೂಫ್ ಟಾಪ್. ಬಿಸಿಲಿನಲ್ಲಿ ಕಟ್ಟಡ ತಣ್ಣಗಿಡಲು ಮತ್ತು
ಚಳಿಗಾಲದಲ್ಲಿ ಬೆಚ್ಚಗಿಡಲು ಇದು ಅವಶ್ಯ. ಬೇರು ತಡೆ ಪದರ,
ಜಲನಿರೋಧಕ, ಪ್ರತ್ಯೇಕ ನೀರು ಶೇಖರಣಾ ವ್ಯವಸ್ಥೆಯನ್ನು ಗ್ರೀನ್
ರೂಫ್ಟಾಪ್‌ಗೆಂದೇ ವಿಶೇಷವಾಗಿ ವಿನ್ಯಾಸಗೊಳಿಸಲಾಗುತ್ತದೆ. ಮಳೆ
ನೀರನ್ನು ಹಿಡಿದಿಡಲು ನಗರ ಪ್ರದೇಶಗಳಲ್ಲಿ ಪಕ್ಷಿ ಸಂಕುಲಕ್ಕೆ ನೀರು
ಒದಗಿಸಲು ಸಹ ಇದು ಸಹಕಾರಿ. ಗಿಡ ನೆಡುವುದೊಂದೇ ಅಲ್ಲ, ಸೋಲಾರ್
ಪ್ಯಾನಲ್ ಆಯ್ಕೆ ಕೂಡ ಇರುವುದರಿಂದ ಕಟ್ಟಡದ ಮಾಲಕರಿಗೆ ಮಾತ್ರವಲ್ಲ
ಪರಿಸರಕ್ಕೂ ನೆರವಾಗಲಿದೆ.
- ಸುಭಾಷ್ ಕೆದೂರು